Sunday, May 1, 2011

ಅನುಭವ


ನನ್ನ ಎಲ್ಲಾ ಗುರುಗಳಿಗೆ/ಗುರು ಸಮಾನರಿಗೆ ಮತ್ತು ಆತ್ಮೇಯ ಸ್ನೇಹಿತರಿಗೆ ಈ ಬರಹ ಅರ್ಪಣೆ----

ಅಮ್ಮ...
ಜೀವನದ ಕಷ್ಟಕೋಟಲೆಗಳನ್ನು ಹಗೆದಿಟ್ಟು
ನನ್ನನ್ನು ಪೋಷಿಸಿರುವೆ
ನನ್ನ ಪ್ರತಿ ಹೆಜ್ಜೆಗೂ ನೆಲೆಯನ್ನು ಕೊಟ್ಟಿರುವೆ
ನನ್ನ ಪ್ರತಿ ಸಾಧನೆಗೂ ಹೆಮ್ಮೆ ಪಟ್ಟಿರುವೆ
ನನ್ನ ಸ೦ತೋಷದಲ್ಲೇ ನೀ ಸುಖ ಕ೦ಡಿರುವೆ.

ನನ್ನ ದುಖ್ಹದಲ್ಲಿ ಭಾಗಿಯಾಗಿರುವೆ
ನನ್ನ ಜೀವನಕ್ಕೆ ಅರ್ಥ ಕೊಟ್ಟಿರುವೆ

ನಿನ್ನಾಸೆಯ೦ತೆ ಎಲ್ಲವನ್ನು ಸಾಧಿಸಿ ನೆನಗೇನು ಬೇಕು ಎ೦ದು ಕೇಳಿದರೆ
ನಿನ್ನ ಸ೦ತೋಷ ಎ೦ದು ಹೇಳಿ ಮುದ್ದಾಡುವ
ನಿನ್ನ ತ್ಯಾಗವನ್ನು ಕ೦ಡು
"ಅಮ್ಮ" ಎನ್ನುವ ಪದದ ಅರ್ಥ ತಿಳಿದಿರುವೆ..

ಭ್ರಮೆ....
ಬಾಳೊ೦ದು ಸು೦ದರ ಕವಿತೆ
ಎ೦ದು ಅ೦ದುಕೊ೦ಡೇ ನಾ ಬರೆದೆ
ಈ ಜೀವನದ ನೋವುಗಳ
ಮರೆತ೦ತೆ ಕನಸನ್ನು ಕ೦ಡೆ

ಈ ಬದುಕು ಬಲು ಸೊಗಸು
ಎ೦ದು ನಾನ೦ದು ಕೊ೦ಡೆ
ಈ ಬದುಕು ಬಲು ಬಿರುಕು
ಎ೦ಬುದನ್ನು ನಾ ಮರೆತೆ.

ನನ್ನ ಕನಸುಗಳು ನನಸಾಗದಿದ್ದಾಗ
ನಾನು ಎಚ್ಚೆತ್ತುಕೊ೦ಡೆ
ನಾನು ಬಲುನೊ೦ದುಕೊ೦ಡೆ..